Abstract:
ಮಾನವ ಸಮಾಜವು ಚಿಂತನೆ, ತಾತ್ತ್ವಿಕತೆ ಮತ್ತು ಬೌದ್ಧಿಕ ಪರಿಕಲ್ಪನೆಗಳ ಆಧಾರದ ಮೇಲೆ ತನ್ನ ನಡವಳಿಕೆಯನ್ನು ರೂಪಿಸಿಕೊಂಡಿದೆ. ತತ್ವಪದ ಎನ್ನುವುದು ಮಾನವ ಬುದ್ಧಿಶಕ್ತಿಯ ಉನ್ನತ ಚಿಂತನೆಗಳ ಸಂಕೇತವಾಗಿದ್ದು, ಇದು ವ್ಯಕ್ತಿಯ ಅಸ್ತಿತ್ವ, ಜ್ಞಾನ, ನೀತಿ, ಸೌಂದರ್ಯ ಹಾಗೂ ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಎದುರಿಸಲು ಸಹಕಾರಿಯಾಗುತ್ತದೆ. ಇದೇ ಸಂದರ್ಭದಲ್ಲಿ, ಮಹಿಳಾ ಸಂವೇದನೆ ಎನ್ನುವುದು ಇತಿಹಾಸದಲ್ಲಿ ಹತೋಟಿಗೆ ಒಳಗಾದ, ನಿರ್ಲಕ್ಷಿತವಾದ ಅಥವಾ ನಿರ್ಲಿಪ್ತಗೊಳಿಸಲ್ಪಟ್ಟ ಮಹಿಳೆಯ ಧ್ವನಿಯನ್ನು ತತ್ತ್ವ ಮತ್ತು ಸಾಹಿತ್ಯದ ಮೂಲಕ ಮರುಸ್ಥಾಪಿಸುವ ಕಾರ್ಯವಾಗಿದೆ. ಈ ಲೇಖನವು ತತ್ವಪದ ಮತ್ತು ಮಹಿಳಾ ಸಂವೇದನೆಯ ನಡುವಿನ ಆಂತರಿಕ ಸಂಬಂಧವನ್ನು ವಿಶ್ಲೇಷಿಸುತ್ತದೆ. ತತ್ವಪದ ಎಂದರೆ ಶಾಶ್ವತ ಸತ್ಯಗಳ ಅರಿವು, ಅಸ್ತಿತ್ವದ ಮೂಲಭೂತ ಪ್ರಶ್ನೆಗಳ ಪರಿಶೀಲನೆ ಮತ್ತು ಮಾನವ ಜೀವನದ ದಿಕ್ಕಿನ ಕುರಿತು ನಿರ್ಧಾರ ಮಾಡವ ಬೌದ್ಧಿಕ ಪ್ರಯತ್ನ.
ತತ್ವಪದ ಮತ್ತು ಮಹಿಳಾ ಸಂವೇದನೆಗಳು ಪರಸ್ಪರ ಪೂರಕ ಸಂಬಂಧ ಹೊಂದಿರುವುದು. ತತ್ವಪದವು ಸಾಮಾನ್ಯವಾಗಿ ವಿಶ್ವಮಾನವ ಪ್ರಶ್ನೆಗಳನ್ನು ಆಳವಾಗಿ ಪರಿಶೀಲಿಸುತ್ತಿದ್ದು, ಬಹುಮಟ್ಟಿಗೆ ಮಹಿಳೆಯ ಅನುಭವಗಳನ್ನು ಮರೆಮಾಚಿದ್ದವು. ಆದರೆ ಮಹಿಳಾ ಸಂವೇದನೆ ತತ್ವಪದಕ್ಕೆ ಸವಾಲು ಹಾಕಿ, "ಮಾನವ" ಎಂಬ ಪದದಲ್ಲಿ ಮಹಿಳೆಯೂ ಸಮಾನ ಅಂಶವಾಗಿ ಒಳಗೊಂಡಿರಬೇಕು ಎಂದು ತಿಳಿಸಿತು. ತತ್ವಪದವು ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯದ ತತ್ವಗಳನ್ನು ನೀಡುತ್ತದೆ. ಮಹಿಳಾ ಸಂವೇದನೆ ಈ ತತ್ವಗಳನ್ನು ಸಾಮಾಜಿಕ ಬದುಕಿಗೆ ಅನ್ವಯಿಸುತ್ತದೆ. ತತ್ವಪದವು ಅಭ್ಯಾಸದ ಮಟ್ಟದಲ್ಲಿ ಅಮೂರ್ತವಾದರೆ, ಮಹಿಳಾ ಸಂವೇದನೆ ಅನುಭವದ ಮಟ್ಟದಲ್ಲಿ ನೆಲೆಯೂರಿದೆ.
.ನವೀನ ಸಮಾಜದಲ್ಲಿ ಮಹಿಳಾ ಸಂವೇದನೆಯ ತಾತ್ತ್ವಿಕ ಪ್ರಸ್ತುತತೆಯನ್ನು ಇಂದು ಮಹಿಳಾ ಸಂವೇದನೆ ಕೇವಲ ಸ್ತ್ರೀಯರ ಹಕ್ಕಿನ ವಿಚಾರವಲ್ಲ, ಅದು ಮಾನವ ಸಮಾಜದ ಸಮಾನತೆಯ ತಾತ್ತ್ವಿಕ ಹೋರಾಟ, ಉದ್ಯೋಗ ಕ್ಷೇತ್ರದಲ್ಲಿ ಸಮಾನ ಅವಕಾಶ, ಗೃಹ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಮಾನ ಹಕ್ಕು, ದೇಹ ಮತ್ತು ಮನಸ್ಸಿನ ಸ್ವಾತಂತ್ರ್ಯದ ಹಕ್ಕು, ಜಾತಿ, ವರ್ಣ, ಧರ್ಮ, ಲಿಂಗ ಭೇದಗಳನ್ನು ಮೀರಿ ಮಾನವೀಯ ನ್ಯಾಯ, ಅಂತರ್ಜಾಲ ಮತ್ತು ಜಾಗತೀಕರಣದ ಯುಗದಲ್ಲಿ ಮಹಿಳಾ ಸಂವೇದನೆ ಡಿಜಿಟಲ್ ಹೋರಾಟ ರೂಪದಲ್ಲೂ ಬೆಳೆಯುತ್ತಿದೆ. ತತ್ವಪದವು ಮಾನವ ಅಸ್ತಿತ್ವದ ತಾತ್ತ್ವಿಕ ನೆಲೆಯನ್ನು ನೀಡಿದರೆ, ಮಹಿಳಾ ಸಂವೇದನೆ ಅದನ್ನು ಸಮಾಜದಲ್ಲಿ ಸಮಾನತೆಯ ಹಂತಕ್ಕೆ ತಂದು ನಿಲ್ಲಿಸುತ್ತದೆ. ಇವೆರಡೂ ಒಂದೇ ದಾರಿಯಲ್ಲಿ ಸಾಗಿದಾಗ ಮಾತ್ರ ಮಾನವ ಸಮಾಜವು ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯದಿಂದ ತುಂಬಿದ ಪರಿಪೂರ್ಣ ಜಗತ್ತಾಗಿ ರೂಪುಗೊಳ್ಳಬಹುದು